ಗುರುವಿನಲ್ಲಿ ಸ್ವಾಯತ ಲಿಂಗದಲ್ಲಿ ಸನ್ನಿಹಿತ ಜಂಗಮದಲ್ಲಿ ಸದರ್ಥನು ಪ್ರಸಾದದಲ್ಲಿ ಪರಿಣಾಮಿ. ಇಂತೀ ಚತುರ್ವಿಧದಲ್ಲಿ ಸನ್ಮತನು ಕೂಡಲಸಂಗಯ್ಯನಲ್ಲಿ ಚೆನ್ನಬಸವಣ್ಣನು.