ಎನಗಾರೂ ಇಲ್ಲ

ವಿಕಿಸೋರ್ಸ್ದಿಂದ


Pages   (key to Page Status)   

ಎನಗಾರೂ ಇಲ್ಲ
ಎನಗಾರೂ ಇಲ್ಲವೆಂಬರು. ಬಾಣನವ ನಾನು
ಮಯೂರನವ ನಾನು
ಕಾಳಿದಾಸನವ ನಾನು. ಕಕ್ಕಯ್ಯ ಹಿರಿಯಯ್ಯ
ಚಿಕ್ಕಯ್ಯ ಚೆನ್ನಯ್ಯ ಎತ್ತಿ ಮುದ್ದಾಡಿಸಿದರೆನ್ನ
ಕೂಡಲಸಂಗಯ್ಯಾ. 353