ವಿಷಯಕ್ಕೆ ಹೋಗು

ಅಗ್ನಿಯ ಕೂಡಾಡಿ ಕಾಷ*ಂಗಳೆಲ್ಲ

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅಗ್ನಿಯ ಕೂಡಾಡಿ ಕಾಷ*ಂಗಳೆಲ್ಲ ಕೆಟ್ಟ ಕೇಡ ನೋಡಯ್ಯ ಜಲಧಿಯ ಕೂಡಾಡಿ ಘಟ್ಟ-ಬೆಟ್ಟಗಳೆಲ್ಲ ಕೆಟ್ಟ ಕೇಡ ನೋಡಯ್ಯ ಜ್ಯೋತಿಯ ಕೂಡಾಡಿ ಕತ್ತಲೆ ಕೆಟ್ಟ ಕೇಡ ನೋಡಯ್ಯ ನಿಮ್ಮ ಶರಣರ ಕೂಡಾಡಿ
ನನ್ನ ಭವಂಗಳು ಕೆಟ್ಟ ಕೇಡ ನೋಡಯ್ಯ ಕೂಡಲಚೆನ್ನಸಂಗಮದೇವ