ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

VVV / + / Vs ರಾಣಾ ರಾಜಸಿಂಹ [ಪ್ರಕರಣ • • •\ \ \ ಪಾಪ, ಆ ಲಕ್ಷಾವಧಿಜನರು ಕ್ಷಣಮಾತ್ರದಲ್ಲಿ ನುಗ್ಗಿ ನುರಿಯಾದರು. ಔರಂಗಜೇಬನ ಅಪ್ಪಣೆಯಂತ ಇಡೀ ಹಿಂದುಸ್ತಾನದಲ್ಲಿ ಜಝಿಯಾ ತೆರಿಗೆಯು ವಸೂಲಾಗ ಹತ್ತಿತು. ಬ್ರಹ್ಮ ಪತ್ರೆಯಿಂದ ಸಿಂಧೂನದಿಯವರೆಗೆ ಯಾವತ್ತೂ ದೇವಾಲಿಯಗಳು ನಾಶವಾಗಹತ್ತಿ ದವು, ಸಾವಿರಾರು ವರುಷಗಳಿಂದ ನಡೆದುಬಂದ ಎತ್ತರವಾದ ಪರ್ವತ ಶಿಖರಗಳ ಮೇಲಿನ ದೇವಾಲಯಗಳು ಸಹ ಮಸೀದಿಗಳಾದವು, ಕಾಶಿ ಯೊಳಗಿನ ವಿಶ್ವೇಶ್ವರನ ದೇವಾಲಯವನ್ನು ಒಡೆದರು, ಮಧುರೆಯೊಳಗಿನ ಶ್ರೀಕೃಷ್ಣ ಕೇಶವನ ದೇವಾಲಯವನ್ನೂ ಒಡೆದರು ಒಂಗಾಲದಲ್ಲಿಯ ಇದೇ ಸ್ಥಿತಿಯಾಯಿತು. ಅನಂತರ ಔರಂಗಜೇಬನು ರಾಜಸ್ತಾನದ ರಜಪೂತರ ಕಡೆಯಿಂದ ಜೆಝಿಯಾ ತೆರಿಗೆಯನ್ನೆತ್ತಲಿಕ್ಕೆ ಹುಕುಮು ಮಾಡಿದನು, ರಜಪೂತರು ಮೊದಲು ಕೊಡಲಿಕ್ಕೆ ಒಪ್ಪಲಿಲ್ಲ ರಾಜಸ್ತಾನದಲ್ಲಿ ಉದೇವುರದ ಹೊರ್ತು ಉಳಿದ ಎಲ್ಲ ರಾಜ್ಯಗಳು ಸಮುದ್ರದಲ್ಲಿ ಚುಕ್ಕಾಣಿಯಿಲ್ಲದೆ ಬಿಟ್ಟ ಹಡಗಗಳಂತೆ ನಿರಾಧಾರಿಗಳಾಗಿದ್ದವು. ನಿಜವಾದ ಅನುಮತಿ ಯನ್ನು ಕೊಡುವ ರಜಪೂತರು ಮೊಗಲರ ದರಬಾರದಲ್ಲಿ ಯಾರೂ ಇರ ಲಿಲ್ಲ. ಜಯಪುರದ ಜಯಸಿಂಹನು ಈ ಕಾಲಕ್ಕೆ ಸ್ವರ್ಗಸ್ಥನಾಗಿದ್ದನು. ವಿಶ್ವಾಸಘಾತಕಿಯಾದ ಔರಂಗಜೇಬನು ಅನೇಕರದ ಯುಕ್ತಿಗ ೪:ದ ಅವನನ್ನು ವಶಪಡಿಸಿಕೊಂಡಿದ್ದನು ಜಯಸಿಂಹನ ಹಿರೇಮಗನು ದಿಲ್ಲಿಯೊಳಗೆ ಸೆರೆಯಲ್ಲಿದ್ದನು, ಆದ್ದರಿಂದ ಜಯಪುರದಲ್ಲಿಯ ಜಝಯಾ ಕರವು ವಸೂಲಾಯಿತು ಉಳಿದ ಅರಸರೂ ಕೊಟ್ಟರು ಜೋಧಪುರದ ಕಾಣಾನಗತಿಯಾದರೂ ಇದೇಪರಿಯಾಯಿತು. ಜೋಧ ಪುರದ ರಾಣಿಯು ಮೊದಮೊದಲು ಕರವಸೂಲಮಾಡುವವರನ್ನು ಓಡಿಸಿ ದಳು, ಆದರೆ ಪಾಪ ? ಅವಳು ಹೆಂಗಸು, ಮಾಡುತ್ತಾಳೇನು? ತೆರಿಗೆ ಯನ್ನು ಕೊಡಲಿಕ್ಕೆ ಒಪ್ಪದಿದ್ದರೂ ಅದಕ್ಕೆ ಬದಲಾಗಿ ಕೆಲವು ಪ್ರದೇಶ ಪನ್ನು ಬಿಟ್ಟು ಕೊಟ್ಟಳು.