೨೧] ರಾಜಸಿಂಹನ ಪತ್ರ ೧೨೭ ರಾಜಸಿಂಹನು ಇದಕ್ಕೆ ಒಪ್ಪಲಿಲ್ಲ ಮುಸಲ್ಮಾನರಿಗೆ ಒಂದು ಪೈ ಸಹ ಕೊಡಲಿಕ್ಕೆಲ್ಲೆಂದು ಪ್ರತಿಜ್ಞೆ ಮಾಡಿದನು. ಇಷ್ಟೇ ಅಲ್ಲ, ಇದರ ಸಂಬಂಧದಿಂದ ಔರಂಗಜೇಬನಿಗೊಂದು ಪತ್ರವನ್ನು ಬರೆದನು ರಾಜ ಸ್ನಾನದ ಇತಿಹಾಸವನ್ನು ಬರೆದ ಕರ್ನಲ್ ಟಾಡ್ ಸಾಹೇಬರು ಆ ಪತ್ರದ ಸಂಬಂಧದಿಂದ ಹೀಗೆ ಹೇಳುತ್ತಾರೆ « ತನ್ನ ಜಾತಿಯ ವತಿಯಿಂದ ಪತ್ರ ಬರೆದು ಬಾದಶಹನಿಗೆ ಬಹಳ ರೀತಿಯಿಂದ ತಿಳಿಸಿ ಹೇಳಿದನು, ನಿಮ್ಮ ದೊಡ್ಡಿ ಸ್ತನಕ್ಕೆ ಧಕ್ಕೆ ಬರುತ್ತದೆಂದೂ ಬಾದಶಹತನಕ್ಕೆ ಕಡಿಮೇತನ ಬರು ತದೆಂದೂ ನಿಶ್ಚಯದ ನೀತಿ ಪರಶಬ್ದಗಳಿಂದ ತಿಳಿಸಿದ್ದನು. ಅದರೊಳಗೆ ಬಾದಶಹನಿಗೆ ಕೊಟ್ಟ ದೋಷವು ಭಯಂಕರವಾದದ್ದಿತ್ತು, ಅದನ್ನು ಓದಿ ಅವನ ತಲೆ ತಿರುಗಿತು. ಯಾವತ್ತು, ಪ್ರಜೆಗಳಿಗೆ ಹಿತಮಾಡುವವರು ಪ್ರತಿಯೊಬ್ಬರಿಗೆ ತಮ್ಮ ತಮ್ಮ ಧರ್ಮದಂತೆ ನಡೆಯಗೊಡುವರು.” ಇವೇ ಮೊದಲಾದ ಎಷ್ಟೋ ಮಾರ್ಮಿಕ ಸಂಗತಿಗಳನ್ನು ಬರೆದಿದ್ದನು. ಈರೀತಿಯ ಮಾರ್ಮಿಕತನವುಳ್ಳಂಧ, ಚಾತುರ್ಯವನ್ನು ತೋರಿಸು ವಂಧ ಮತಸ್ವಾತಂತ್ರವನ್ನು ಪ್ರಕಟಿಸತಕ್ಕಂಥ ಓದುವದಕ್ಕೆ ಪ್ರಿಯ ಕರವಾದಂಧ ಪತ್ರಗಳನ್ನು ಜಗತ್ತಿನಲ್ಲಿ ಅಪರೂಪವಾಗಿ ನೋಡಬಹುದು. « ನೀನು ಜೆಝಿಯಾಕರವನ್ನು ಕೊಡಲಿಕ್ಕೆ ಬೇಕು. ಇಷ್ಟೇ ಅಲ್ಲ. ನಮ್ಮ ರಾಜ್ಯದಲ್ಲಿ ಗೋಹತ್ಯ ಮಾಡುವದಕ್ಕೆ ಬಾಧೆಬರಲಾರದು, ಅದು ಮಡತಕ್ಕ ಕರ್ತವ್ಯವು, ಮತ್ತು ನಿಮ್ಮ ರಾಜ್ಯದೊಳಗಿನ ಯಾವತ್ತು, ದೇವಾಲಯಗಳು ನಾಶವಾಗಬೇಕು.” ಎಂದು ಅವನ ಪತ್ರಕ್ಕೆ ಉತ್ತ ರವು ದೊರಕಿತು. ಇದನ್ನು ಓದಿರಾಜಸಿಂಹನು ಯುದ್ಧದ ಸಿದ್ದತೆ ಯನ್ನು ಮಾಡತೊಡಗಿದನು. ಇತ್ತ ಔರಂಗಜೇಬನೂ ಅಪೂರ್ವವಾದ ಯುದ್ಧ ಸಿದ್ಧತೆಯನ್ನು ಮರಹತ್ತಿದನು. ಚೀನದ ಶಹನಾಗಲಿ ಇರಾಣದ ಶಹನಾಗಲಿ ತನ್ನ ಮೇಲೆ ದಂಡೆತ್ತಿ ಬರುತ್ತಿದ್ದರೆ ಮಾಡುವಷ್ಟು ಸಿದ್ಧತಗೆ ಎಷ್ಟೋ ಪಟ್ಟು ಹೆಚ್ಚಾಗಿ ರಜಪೂತವೀರನಿಗೋಸ್ಕರ ತಯಾರಿ ಮಾಡಬೇಕಾಯಿತು.
ಪುಟ:ರಾಣಾ ರಾಜಾಸಿಂಹ.djvu/೧೪೧
ಗೋಚರ