ಅಯ್ಯ ಸತ್ಯವ ನುಡಿಯದ ಸದಾಚಾರದಲ್ಲಿ ನಡೆಯದ ಸದ್ಭಕ್ತಿಯ ಹಿಡಿಯದ ನಿಜಮುಕ್ತಿಯ ಪಡೆಯದ ಸತ್ಕ್ರಿಯವ ಸಾರದ ಸಮ್ಯಜ್ಞಾನವ ಮುಟ್ಟದ; ಸುಡು ಸುಡು_ಈ ವೇಷದ ಭಾಷೆಯ ನೋಡಿ ಗುಹೇಶ್ವರಲಿಂಗವು ನಗುತ್ತೈದಾನೆ ಕಾಣಾ ಚೆನ್ನಬಸವಣ್ಣಾ.