ಪುಟ:ರಾಣಾ ರಾಜಾಸಿಂಹ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1] ರಾಜೋಪಾಧ್ಯಾಯ 04 wwws wwwswwwkwwws ನಿರ್ಮಲೆಯು ಚಂಚಲೆ, ನೀನು ಅಬಲೆಯಾದರೇನಾಯಿತು? ನಿನ್ನ ದೇಹದಮೇಲೆ ನಿನ್ನ ಪೂರ್ಣ ಅಧಿಕಾರವಿಲ್ಲವೆ ? ನೀನು ರುಕ್ಕಿಣಿ ಯಾದರೆ ಕೃಷ್ಣನು ಎಲ್ಲಿದ್ದರೂ ಬಂದು ನಿನ್ನನ್ನು ಬಿಡಿಸಿಕೊಳ್ಳುವನು.” ಸಲಜ್ಞಾಂತಃಕರಣದಿಂದ ಚಂಚಲಕುಮಾರಿಯು ಮುಖವನ್ನು ತಗ್ಗಿಸಿ ನೆಲದಕಡೆಗೆ ನೋಡಹತ್ತಿದಳು ಆಕೆಯ ಸುಂದರವಾದ ಮುಖ ಕಮಲದಮೇಲೆ ಆಶೆ ಹಾಗು ನಿರಾಶೆ ಆನಂದ ಹಾಗು ದುಃಖ ಇವೇ ಮನೋವಿಕಾರಗಳು ಕ್ಷಣಮಾತ್ರದಲ್ಲಿ ತೋರಿ ಅಡಗಿದವು, ಆಮೇಲೆ “ನಿರ್ಮಲೆ, ನನ್ನ ದೈವವು ಅಷ್ಟು ಒಲವತ್ತರವಾಗಿ ಎಲ್ಲಿರುವುದು ? ನನ್ನ ಪೂರ್ವದ ಪುಣ್ಯವೇನಾದರೂ ಇದ್ದರೆ ಮಾತ್ರ ಒಂದುವೇಳೆ ಹಾಗಾಗ .ಬಹುದು, ಅಂಧ ಯೋಗವೂ ಕೂಡಿಬರಬಹುದು” ನಿರ್ಮಲೆ-It ಅಂಧಾ ಯೋಗವು ಕೂಡಿಬರದಿದ್ದರೇನಾಯಿತು? ರಾಜಸಿಂಹನ ಬಲವು ಅದ್ವಿತೀಯವಾದದ್ದು, ನಾವಾಗಿಯ ಅತ್ತ ಕಡೆಗೆ ಹೇಳಿಕಳಿಸಿದರಾಯಿತು * ಚಂಚಲೆ.. ಸರಿ, ಮನುಷ್ಯನನ್ನು ಕಳುಹಿಸಿದ ಹೊರ್ತು ಈ ಕಾರ್ಯವು ಸಾಧ್ಯವಾಗದು, ಉಪಾಧ್ಯಾಯನನ್ನು ಕರೆ. ಆತನು ನನ್ನ ನ್ನು ಬಹಳ ಪ್ರೀತಿಸುವನು ಆತನ ಮನಸಿನಲ್ಲಿ ಬಂದರೆ ಈ ಕಾರ್ಯ ವನ್ನು ಸಹಜವಾಗಿ ಮಾಡಬಲ್ಲನು ಆತನನ್ನು ಇತ್ತ ಕರೆತರುವ ಮೊ ದಲು ಆತನಿಗೆ ಈ ಸಂಗತಿಯನ್ನೆಲ್ಲ ಹೇಳಿರು ಇಲ್ಲದಿದ್ದರೆ ನನಗೆ ಹೇಳು ವುದಕ್ಕೆ ಲಜ್ಜೆಯನಿಸುತ್ತದೆ.” ಎಂದು ಕೆಳಗೆ ಮುಖವನ್ನು ಬೊಗ್ಗಿಸಿ ಹೇಳಿದಳು. ಅನಂತ ಮಿಶ್ರನೆಂಬ ರಾಜೋಪಾಧ್ಯಾಯನಿದ್ದನು. ಆತನು ಚಂಚ ಶಕುಮಾರಿಯನ್ನು ತನ್ನ ಹೊಟ್ಟೆಯಮಗಳಂತೆ ನೋಡಿಕೊಳ್ಳುತ್ತಿದ್ದನು. ಧರ್ಮಶಾಸ್ತ್ರದಲ್ಲಿ ಬೇಕಾದಂಥ ಪಂಡಿತರೊಡನೆ ವಾದವಿವಾದ ಮಾಡುತ್ತಿ ದ್ದನು, ಮತ್ತು ಎಂದೂ ಸೋತು ಹಿಂಜರಿಯುತ್ತಿದ್ದಿಲ್ಲ, ಆತನ ಅಧ್ಯ «ಯನವಾದರೂ ವಿಶೇಷವಾಗಿತ್ತು, ಇಂಧ ಜಾಣನೂ ಶಾಸ್ತ್ರಜ್ಞನೂ