ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಳ ರಾಣಾ ರಾಜಸಿಂಹ [ಪ್ರಕರಣ

ವಿದ್ಯಾವಿಭೂತಿತನೂ ಆದ ಉಪಾಧ್ಯಾಯಸಿಗೆ ರಾಜಸಭೆಯೊಳಗಿನ ಎಲ್ಲ ಜನರು ಮಾನಕೊಡುತ್ತಿದ್ದರು | ಚಂಚಲಕುಮಾಂಯು ತನ್ನ ನ್ನು ಕರೆಯಿಸಿರುವಳೆಂಬದನ್ನು ಕೇಳಿದ ಕೂಡಲೆ ಆತನು ಹೊರತು ಅಂತಃಪುರಕ್ಕೆ ಬಂದನು ಆತನನ್ನು ಯಾರೂ ತಡೆಯುತ್ತಿದ್ದಿಲ್ಲ ಮತ್ತು ಅಲ್ಲಿಗೆ ಬರುವ ಮೊದಲು ನಿರ್ಮಲಕುಮಾ ರಿಯು ಎಲ್ಲ ಸಂಗತಿಯನ್ನೂ ಹೇಳಿದ್ದಳು ಉಪಾಧ್ಯಾಯನ ಆಕೃತಿಯು ಭವ್ಯವಾದದ್ದು, ಮುಖಕಾಂ ತಿಯು ನೋಡಿದವರಲ್ಲಿ ಆದರವನ್ನು ಂಟುಮಾಡುವಂತಿತ್ತು, ವಿಶಾಲವಾದ ಹಣೆಯಲ್ಲಿ ಚಂದನದ ತ್ರಿಪ್ರಂದ್ರವನ್ನು ಹಚ್ಚಿದ್ದನು ಸರ್ವಾಂಗಕ್ಕೂ ಭಸ್ಮವನ್ನು ಲೇಪಿಸಿದ್ದನು. ಕೊರಳೊಳಗೆ ರುದ್ರಾಕ್ಷದ ಮಾಲೆಯನ್ನು ಹಾಕಿದ್ದನು ತಾನು ಕರೆಯಿಸಿದ ಕೂಡಲೆ ಆತನು ಬಂದದ್ದನ್ನು ಕಂಡು ಚಂಚಲಕುಮಾರಿಯ ಅಂತಃಕರಣವು ತುಂಬಿಬಂದು ಆಕೆಯ ಕಕ್ಕೊಳಗಿಂದ ಪ್ರೇಮಾಶ್ರುಗಳು ಹರಿಯಹತ್ತಿದವ ಬಂದಕೂಡಲೆ ಅನಂತ ಮಿಶ್ರನು ರಾಜಕುಮಾರಿ, ಈಹೊತ್ತು ನನ್ನ ಸ್ನೇಕೆ ಕರೆಯಿಸಿದ! ನಿನ್ನ ಮುಖ ಲಕ್ಷ್ಮ ಣದಿಂದ ನಿನಗೇನೂ ಒಂದು ದೊಡ್ಡ ಸಂಕಟವು ಒದಗಿದಂತೆ ತೋರುತ್ತದೆ ? ಎಂದನು - ಚಂಚಲೆ : ಉಪಾಧ್ಯಾಯರೇ ತಮ್ಮ ಹೇಳಿಕೆಯಂತೆ ನಾನು ನಿಜ ವಾಗಿ ದೊಡ್ಡ ಸಂಕಟದಲ್ಲಿ ಬಿದ್ದಿರುತ್ತನ ಆಸಂಕಟದಿಂದ ಬಿಡಿಸುವೆ ರೆಂತಲೆ ನಿಮ್ಮನ್ನು ಕರೆಯಿಸಿರುವೆನು ತಮ್ಮ ಹೂರ್ತು ನನ್ನ ಸಂಕಟವನ್ನು ದೂರಮಾಡುವವರು ಬೇರೆಯಾರು? ಸ್ವಾಮಿ, ನನ್ನ ಬಾಯಿಂದ ಸ್ತ್ರೀಜಾ ತಿಯ ಸ್ವಾಭಾವಿಕ ಮರ್ಯಾದೆಯನ್ನು ಮೀರಿ ಒಂದು ವೇಳ ಶಬ್ದಗಳು ಹೊರಟರೆ, ಅದಕ್ಕೋಸುಗ ಕ್ಷಮಿಸಿಲ ? « ಮಗಳೆ ಈಅನಂತ ಮಿಶ್ರನನ್ನು ನಿನ್ನ ತಂದೆಗೆ ಸಮಾನನೆಂದರಿತು, ಸಂಕೋಚವಿಲ್ಲದೆ ನಿನ್ನ ಸಂಕಟವನ್ನು ಹೇಳು, ಅದರ ಪರಿಹಾರಕ್ಕಾಗಿ ನನ್ನಿಂದಾದಷ್ಟು ಪ್ರಯತ್ನ ಮಾಡುವೆನೆಂದು ನಿಶ್ಚಯವಾಗಿ ನಂಬು, ೨೨