ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪. ರಾಣಾ ರಾಜಸಿಂಹ {ಪ್ರಕರಣ vv ಬಾಗದಿಂದ ಹೊರಬಿದ್ದನು ಮಳೆಯ ನಿಂತಿತು ಆ ಭಯಂಕರವಾದ ರಾತ್ರಿಯ ಹೋಗಿ ನಾಲ್ಕೂ ಕಡೆಗೆ ಸೂರ್ಯೋದಯದ ಪ್ರಕಾಶವು ಬೀಳಹತ್ತಿತ್ತು. ಎಂಟನೆಯ ಪ್ರಕರಣ. <ಇಲ್ಆನ್ ತಪಸ್ಸಿನಿಯ ಜಯಸಿಂಹನೂ ಮಧ್ಯಾಹ್ನ ಕಾಲದ ಸಮಯ ಸೂರ್ಯನ ಪ್ರಖರ ಕಿರಣಗಳು ಅಸಹ್ಯವಾದ ತಾಪವನ್ನು ಕೊಡುತ್ತಿರುವವ, ಅನೇಕ ಪಶುಪಕ್ಷಿಗಳು ನೀರು ಹುಡುಕುತ್ತ ಅರಣ್ಯದಲ್ಲಿ ಅತ್ತಿತ್ತ ಹಾರಾಡುತ್ತಿರುವವು ಎಷ್ಟೋ ಪ್ರಾಣಿಗಳು ನದಿ, ಕೊಳ, ಕಾಲಿವೆ ಮುಂತಾದ ಜಲಾಶಯಗಳಲ್ಲಿಳಿದು ತಮ್ಮ ನೀರಡಿಕೆಯನ್ನು ತೀರಿಸಿಕೊಳ್ಳುತ್ತಿರುವವು ಇಂಥ ಸಮಯದಲ್ಲಿ ದಿಲ್ಲಿಯ ಸವಿಾಪದ ಒಂದು ಅರಣ್ಯದ ಮಧ್ಯದಲ್ಲಿ ಒಬ್ಬ ಸ್ವಾರನು ತನ್ನ ಕುದುರೆಯನ್ನು ಒಳ್ಳೆ ವೇಗದಿಂದ ಓಡಿಸುತ್ತ ಬರುತ್ತಿದ್ದನು ಅರಣ್ಯ ದೊಳಗಿನದೊಂದು ವೃಕ್ಷದ ನೆರಳಿಗೆ ತನ್ನ ಕುದುರೆಯನ್ನು ನಿಲ್ಲಿಸಿ, ಸುತ್ತ ಲೂ ನೋಡುತ್ತ ಆತನು ಮನಸ್ಸಿನಲ್ಲಿ ' ಮೃಗವು ಎಲ್ಲಹೋಯಿತೋ ಗೊತ್ತಾಗಲಿಲ್ಲ ಯಾವತ್ತೂ ಸಂಗಡಿಗರು ಹಿಂದುಳಿದರು ಬೇಟೆಯ ಭರದಲ್ಲಿ ಅವರನ್ನು ಮರೆತೆನು ನೀರಡಿಕೆಯಿಂದ ಗಂಟಲು ಒಣಗಿಹೋಗಿದೆ ಎಲ್ಲಿಯಾದರೂ ನೀರು ಹುಡುಕಬೇಕು ಎಂದು ಅತ್ತಿತ್ತ ನೋಡಹತ್ತಿ ದನು ಸಮೀಪದಲ್ಲಿ ಒಂದು ಸರ್ಣಶಾಲವು ಕಂಡುಬಂತು ಅದರ ಬಾಗಿಲದಲ್ಲಿ ಒಬ್ಬ ತಪಸ್ವಿನಿಯು ಕೂತಿದ್ದಳು ಅಲ್ಲಿ ನೀರು ದೊರೆಯ ಬಹುದಂಬ ಆಸೆಯಿಂದ ತನ್ನ ಕುದುರೆಯನ್ನು ಅಲ್ಲಿಯವರೆಗೆ ಒಯ್ದನು. ಕುದುರೆಯ ಗೊರಸಿನ ಸಪ್ಪಳವನ್ನು ಕೇಳಿದಕೂಡಲೇ ವಿಚಾರಮಗ್ನಳಾದ ಆ ತಪಸ್ವಿನಿಯು ಮೇಲಕ್ಕೆ ಮೋರೆಯಲ್ಲಿ ಆಶ್ಚರ್ಯದ ದೃಷ್ಟಿಯಿಂದ ಆತನನ್ನು ನೋಡಿದಳು, ಆ ಸ್ವಾರನು ೨೫ ವರ್ಷದ ತರುಣನು, ಶರೀ