ದಶದಿಕ್ಕು ಧರೆ ಗಗನವೆಂಬುದ ನಾನರಿಯೆನಯ್ಯಾ `ಲಿಂಗಮಧ್ಯೇ ಜಗತ್ ಸರ್ವಂ' ಎಂಬುದ ನಾನರಿಯೆನಯ್ಯಾ ಲಿಂಗಸೋಂಕಿನ ಸುಖದೊಳಗೆ. ಕೂಡಲಸಂಗಮದೇವಯ್ಯಾ ಅಂಬುಧಿಯೊಳಗೆ ಬಿದ್ದಾಲಿಕಲ್ಲಿನಂತೆ ಭಿನ್ನಭಾವವನರಿಯದೆ `ಶಿವಶಿವಾ' ಎನುತ್ತಿದ್ದೆ ನಾನು.