ವಚನದ ಹುಸಿ ನುಸುಳೆಂತು ಮಾಬುದೆನ್ನ ಮನದ ಮರ್ಕಟತನವೆಂತು ಮಾಬುದೆನ್ನ ಹೃದಯದ ಕಲ್ಮಷವೆಂತು ಮಾಬುದೆನ್ನ ಕಾಯವಿಕಾರಕ್ಕೆ ತರಿಸಲುವೋದೆನು ಎನಗಿದು ವಿಧಿಯೇ ಕೂಡಲಸಂಗಮದೇವಾ 41