ಇಂದು ಸಾವ ಹೆಂಡತಿಗೆ ನಾಳೆ ಸಾವ ಗಂಡನವ್ವಾ ! ಗಳಿಗೆಗಳಿಗೆಗೆ ಮಗು ಹುಟ್ಟಿ ಕೈ ಬಾಯ್ಗೆ ಬಂದಿತ್ತವ್ವಾ ! ಅರಿವು ಕುರುಹನು ಮರವೆ ನುಂಗಿತ್ತು; ಗುಹೇಶ್ವರನುಳಿದನವ್ವಾ !