ಗುರುವಿನಿಂದಾದ ಕಾಯವ ಬೆರಸಿ ಗುರುವನರಿಯದಾದೆನಯ್ಯಾ. ಲಿಂಗದಿಂದಾದ ಜೀವ ಬೆರಸಿ ಲಿಂಗವನರಿಯದಾದೆನಯ್ಯಾ. ಜಂಗಮದಿಂದಾದ ಮನವ ಬೆರಸಿ ಜಂಗಮವನರಿಯದಾದೆನಯ್ಯಾ. ಈ ತ್ರಿವಿಧ ಭಕ್ತಿಯುಕ್ತಿಯ ಅರುಹಿಸಿ ಕೊಟ್ಟ ಸಂಗನಬಸವಣ್ಣನ ಬೆರಸಿ_ನೀನು ನಾನು ಬದುಕಿದೆವು ಕಾಣಾ ಗುಹೇಶ್ವರಾ.