ಗುರುವಿನಿಂದಾದ ಕಾಯವ ಬೆರಸಿ,
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಗುರುವಿನಿಂದಾದ ಕಾಯವ ಬೆರಸಿ
ಗುರುವನರಿಯದಾದೆನಯ್ಯಾ. ಲಿಂಗದಿಂದಾದ ಜೀವ ಬೆರಸಿ
ಲಿಂಗವನರಿಯದಾದೆನಯ್ಯಾ. ಜಂಗಮದಿಂದಾದ ಮನವ ಬೆರಸಿ ಜಂಗಮವನರಿಯದಾದೆನಯ್ಯಾ. ಈ ತ್ರಿವಿಧ ಭಕ್ತಿಯುಕ್ತಿಯ ಅರುಹಿಸಿ ಕೊಟ್ಟ ಸಂಗನಬಸವಣ್ಣನ ಬೆರಸಿ_ನೀನು ನಾನು ಬದುಕಿದೆವು ಕಾಣಾ ಗುಹೇಶ್ವರಾ.