Pages(key to [[Help:Page Status{{!}}Page Status]])
ಆಕಾಶಮಂಡಲದೊಳಗೆ ಲೋಕೇಶನ ಪಟ್ಟಣವಿರ್ಪುದು ನೋಡಾ. ಆ ಪಟ್ಟಣಕ್ಕೆ ನಾಲ್ಕು ಬಾಗಿಲು ಎಂಟು ಬೀದಿ ಹದಿನಾರು ಚದುರಂಗದ ಚಾವಡಿ ಮೂವತ್ತೆರಡು ಕೇರಿ. ಕೇರಿಗಳೊಳಗೆ ಪರಿಕಾರರ ಕಟ್ಟಳೆ ನೋಡಾ ! ಆಕಾಶಮಂಡಲವನಡರಿ ಲೋಕೇಶನ ಕಂಡಾತಂಗಲ್ಲದೆ ಆ ಪಟ್ಟಣವು ಆರಿಗೂ ಸಾಧ್ಯವಿಲ್ಲ ನೋಡಾ ಅಖಂಡೇಶ್ವರಾ.