ಆಕಾಶಮಂಡಲದೊಳಗೆ ನಾಲ್ಕು ಲೋಕೇಶನ
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಆಕಾಶಮಂಡಲದೊಳಗೆ ಲೋಕೇಶನ ಪಟ್ಟಣವಿರ್ಪುದು ನೋಡಾ. ಆ ಪಟ್ಟಣಕ್ಕೆ ನಾಲ್ಕು ಬಾಗಿಲು
ಎಂಟು ಬೀದಿ
ಹದಿನಾರು ಚದುರಂಗದ ಚಾವಡಿ
ಮೂವತ್ತೆರಡು ಕೇರಿ. ಕೇರಿಗಳೊಳಗೆ ಪರಿಕಾರರ ಕಟ್ಟಳೆ ನೋಡಾ ! ಆಕಾಶಮಂಡಲವನಡರಿ
ಲೋಕೇಶನ ಕಂಡಾತಂಗಲ್ಲದೆ ಆ ಪಟ್ಟಣವು ಆರಿಗೂ ಸಾಧ್ಯವಿಲ್ಲ ನೋಡಾ ಅಖಂಡೇಶ್ವರಾ.