Pages(key to [[Help:Page Status{{!}}Page Status]])
ಒಮ್ಮೆ ಜ್ಞಾನಿಯೆನಿಸಿ ಒಮ್ಮೆ ಅಜ್ಞಾನಿಯೆನಿಸಿ ಒಮ್ಮೆ ವಿಕಲನೆನಿಸಿ ಒಮ್ಮೆ ನಿಃಕಲನೆನಿಸಿ ಒಮ್ಮೆ ಭ್ರಾಂತನೆನಿಸಿ ಒಮ್ಮೆ ನಿಭ್ರಾಂತನೆನಿಸಿ ನಾನಾ ತೆರದಿಂದೆ ಎನ್ನ ಹುಸಿದಿಟವ ಮಾಡಿಕಾಡದಿರಯ್ಯ. ನೀವು ದಯಾನಿಧಿ ಎಂದು ನಂಬಿದೆನಯ್ಯ. ನಿಮ್ಮ ಕರುಣಕಟಾಕ್ಷದಿಂದೆ ನೋಡಿ ಸಲಹಯ್ಯ ಎನ್ನ ಅಖಂಡೇಶ್ವರಾ.