ವಿಷಯಕ್ಕೆ ಹೋಗು

ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 ಪಂಚತಂತ್ರ ಕಥೆಗಳು. ಹೊದೆದುಕೊಂಡು ಹೋಗುತ್ತಿದ್ದನು. ಹೀಗಿರಲಾಗಿ ಒಬ್ಬ ದುರ್ಜನನು ಈ ಸಂಗತಿಯನ್ನು ತಿಳಿದುಕೊಂಡು ಆ ಧನವನ್ನು ಕಳಲಿಕ್ಕೆ ಶಿಷ್ಯತ್ವ ನ್ನು ವಹಿಸಿ ಆಷಾಢಭೂತಿಯೆಂಬ ಹೆಸರಿಟ್ಟುಕೊಂಡು ಅತ್ಯಂತ ವಿನದು ಭಕ್ತಿಗಳನ್ನು ಆತನಿಗೆ ತೋರಿಸಿ ನಂಬಿಸಿ ಕೆಲಸಗಳ ಮಾಡುತ್ತಾ, ಒಂದು ದಿನ ಉದಯಕಾಲದಲ್ಲಿ ಆ ಯೋಗಿಯೊಂದಿಗೆ ಹಾದಿನಡೆವಾಗ ಒಂದು ಹುಲ್ಲುಕಡ್ಡಿಯನ್ನು ಕೈಯ್ಯಲ್ಲಿ ಹಿಡಿದುಕೊಂಡು ಆತನಿಗೆ ತೋರಿಸಿ, ಅಯ್ಯಾ, ನಾವು ನಿನ್ನೆ ರಾತ್ರಿ ಮಲಗಿಕೊಂಡಿದ್ದ ಸ್ಥಲದಲ್ಲಿ ಮನೆಯವರ ದಾದ ಈ ಹುಲ್ಲಿನಕಡ್ಡಿ ನನ್ನ ಬಟ್ಟೆಯಲ್ಲಿ ಅಂಟಿಕೊಂಡು ಬಂದಿತು. ಪರರ ಸೊತ್ತನ್ನು ಅಪಹರಿಸುವುದು ಒಳ್ಳೆಯದಲ್ಲ. ನನಗೆ ಅಪ್ಪಣೆ ಕೊಟ್ಟರೆ ನಾನು ತಿರುಗಿಹೋಗಿ ಇದನ್ನು ಅವರಿಗೆ ಕೊಟ್ಟು ಬರುತ್ತೇನೆ ಎಂದು ಹೇಳಿ ಆತನ ಅಪ್ಪಣೆ ತೆಗೆದುಕೊಂಡು ಹಿಂದಕ್ಕೆ ಹೋಗಿ ದಾರಿಯಲ್ಲಿ ಸ್ವಲ್ಪ ಹೊತ್ತಿದ್ದು ಆಮೇಲೆ ಆತನ ಬಳಿಗೆ ಬಂದನು, ಅವನ್ನು ಯೋಗಿ ನೋಡಿ ಇವನು ಸವ್ರವ್ಯಾಪೇಕ್ಷೆ ಯಿಲ್ಲದವನೆಂದು ದೃಢವಾಗಿ ಮನಸ್ಸಿನಲ್ಲೆಣಿಸಿ ತನ್ನ ಬೊಂತೆಯನ್ನು ತಾನು ಹೊರಲಾರೆನೆಂದು ಆಷಾಢಭೂತಿಯ ಕೈಯಲ್ಲಿ ಕೊಟ್ಟನು. ಬಳಿಕ ಒಂದುದಿನ ಅರಣ್ಯ ಮಧ್ಯದಲ್ಲಿ ಹೋಗು ತಿರುವಾಗ ಆ ಯೋಗಿ ಒಂದು ಕೆರೆಯನ್ನು ಕಂಡು ಅಲ್ಲಿಗೆ ಹೋಗಿ ಆಚ ಮನ ಮಾಡುತ್ತಿದ್ದನು. ಆ ಸಮಿಾಪವಲ್ಲಿ ಎರಡು ಟಗರುಗಳು ಅತ್ಯು ಗ್ರವಾಗಿ ಒಂದಕ್ಕೊಂದು ತಲೆ ಒಡೆವಹಾಗೆ ಡೀ ಕೊಟ್ಟು ಕೊಟ್ಟು ಕಾಯುತ್ತಿದ್ದುವು. ಆಗ ಅವುಗಳ ತಲೆಗಳು ಒಡೆದು ಸೋರಿದ ರಕ್ತವು ನೆಲದಲ್ಲಿ ಬಿದ್ದು ಕರಣೆ ಕಟ್ಟಿತು, ಒಂದು ನರಿ ಅವನ್ನು ಮಾಂಸಖಂಡ ವೆಂದು ನೆನಸಿ ಹತ್ತಿರಕ್ಕೆ ಬಂದು ಇದು ಮೇಷಯುದ್ಧದ ಮಧ್ಯವೆಂದು ಅರಿಯದೆ ಜಿಹ್ವಾಚಾಪದಿಂದ ಅದನ್ನು ತಿನ್ನುತ್ತಿರಲಾಗಿ, ಮುಂಚೆ ಡೀ ಕೊಟ್ಟು ಹಿಂದುಹಿಂದಕ್ಕೆ ಹೋಗಿ ತಿರುಗಿ ಡೀಕೊಡುವ ಟಗರುಗಳ ಮಧ್ಯದಲ್ಲಿ ಸಿಕ್ಕಿ ಆ ನರಿ ಪ್ರಾಣಬಿಟ್ಟಿತು. ಆ ಯೋಗಿ ಅದನ್ನು ನೋಡಿ ವಿಚಾರಪಟ್ಟು ಮೇಷಯುದ್ಧದಿಂದ ನರಿಯು ಹಾನಿಪಟ್ಟಿತೆಂದು ನೆನಸಿ, ಆವಾಢಭೂತಿಯನ್ನು ಕೂಗಲಾಗಿ, ಅವನು ಮಾತಾಡಿದುದರಿಂದ ಧನ