ಅಕ್ಷರವ ಬಲ್ಲೆನೆಂ(ವೆಂ?)ದು ಅಹಂಕಾರವೆಡೆಗೊಂಡು ಲೆಕ್ಕಗೊಳ್ಳರಯ್ಯಾ. ಗುರು ಹಿರಿಯರು ತೋರಿದ ಉಪದೇಶದಿಂದ; ವಾಗದ್ವೈತವನೆ ಕಲಿತು ವಾದಿಪರಲ್ಲದೆ ಆಗು_ಹೋಗೆಂಬುದನರಿಯರು. ಭಕ್ತಿಯನರಿಯರು ಯುಕ್ತಿಯನರಿಯರು [ಮುಕ್ತಿಯನರಿಯರು] ಮತ್ತೂ ವಾದಕೆಳಸುವರು. ಹೋದರು ಗುಹೇಶ್ವರಾ ಸಲೆ ಕೊಂಡಮಾರಿಗೆ.