ವಿಷಯಕ್ಕೆ ಹೋಗು

ಅಕ್ಷರವ ಬಲ್ಲೆನೆಂ(ವೆಂ?)ದು ಅಹಂಕಾರವೆಡೆಗೊಂಡು,

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಅಕ್ಷರವ ಬಲ್ಲೆನೆಂ(ವೆಂ?)ದು ಅಹಂಕಾರವೆಡೆಗೊಂಡು
ಲೆಕ್ಕಗೊಳ್ಳರಯ್ಯಾ. ಗುರು ಹಿರಿಯರು ತೋರಿದ ಉಪದೇಶದಿಂದ; ವಾಗದ್ವೈತವನೆ ಕಲಿತು ವಾದಿಪರಲ್ಲದೆ ಆಗು_ಹೋಗೆಂಬುದನರಿಯರು. ಭಕ್ತಿಯನರಿಯರು ಯುಕ್ತಿಯನರಿಯರು
[ಮುಕ್ತಿಯನರಿಯರು] ಮತ್ತೂ ವಾದಕೆಳಸುವರು. ಹೋದರು ಗುಹೇಶ್ವರಾ ಸಲೆ ಕೊಂಡಮಾರಿಗೆ.