ವಾದ ಹೋಲಿಕೆಯಿದ್ದರೂ ಕೆಲವೆಡೆಗಳಲ್ಲಿ ಬಹಳ ವ್ಯತ್ಯಾಸಗಳಿರುವುವು. ಕಥಾ ಸಂದರ್ಭವು ಜೈನ ಪದ್ದತಿಯನ್ನನುಸರಿಸಿರುವುದರಿಂದ ಜೈನ ಧರ್ಮವು ಅಲ್ಲಲ್ಲಿ ವರ್ಣಿತವಾಗಿದೆ. ಕವಿಯು ಸಂಸ್ಕೃತ ಪದಗಳನ್ನು ಹೆಚ್ಚಾಗಿ ಉಪಯೋಗಿಸಿದ್ದರೂ ಪ್ರಕೃತಕ್ಕೆ ತಕ್ಕಂತೆ ಪದಗಳನ್ನು ಜೋಡಿಸಿರುವುದರಿಂದ ಕವಿತೆಯು ಬಹಳ ಗಂಭೀರವಾಗಿಯೂ ಲಲಿತವಾಗಿಯೂ ಇರುವುದು. ವರ್ಣನನ ಭಾಗವನ್ನು ಷಡಕ್ಷರಿ ಮೊದಲಾದ ಕವಿಗಳ೦ತೆ ಲಂಬಿಸದೆ ಸಂದರ್ಭಕ್ಕೆ ತಕ್ಕಂತೆ ಹ್ರಸ್ವ ಮಾಡಿರುವುದು ಕವಿತಾಸ್ವಾರಸ್ಯವನ್ನು ಹೆಚ್ಚಿಸಿರುವುದು. ಭಾಷೆಯು ನಿರ್ದುಷ್ಟವಾಗಿಯೂ ಕೇವಲ ಪ್ರೌಢವಾಗಿಯೂ ಅಚ್ಚ ಹಳಗನ್ನಡ ಶೈಲಿಯುಳ್ಳದ್ದಾಗಿಯೂ ಕ್ಲಿಷ್ಟವಿಲ್ಲದೆಯೂ ಇರುವುದರಿಂದ ಕವಿತೆಯು ಓದುವವರಿಗೆ ಬಹಳ ಮನೋಹರವಾಗಿರುವುದು.
ಈ ಗ್ರಂಥದಲ್ಲಿ ಮುಂದೆ ಹೇಳುವ ವೃತ್ತಗಳು ಕಾಣಬರುವುವು :-ಕಂದ (೧೪೯೧), ಚ೦ಪಕಮಾಲೆ (೫೧), ಮತ್ತೇಭವಿಕ್ರೀಡಿತ (೩೮), ಉತ್ಪಲಮಾಲೆ (೧೭೯), ಮಹಾಸ್ರಗ್ಧರ (೭೯), ಶಾರ್ದೂಲ ವಿಕ್ರೀಡಿತ (೪೦), ಒಗ್ಗರ (೮), ಸೃದ್ಧಿ (೭), ದ್ರುತವಿಲಂಬಿತ (೩), ಮಾಲಿನಿ (೩), ಮಂದಾಕ್ರಾಂತ (೨), ಸ್ವಾಗತ (೨), ಹರಿಣಿ (೨) ; ಅಕ್ಕರ, ಉತ್ಸಾಹ, ತರಳ, ನವನಳಿನ, ಮತ್ತ ಕೋಕಿಲ, ಮಲ್ಲಿಕಾ ಮಾಲೆ, ರಥೋತ, ಲಲಿತ-ಇವೆಲ್ಲವೂ ಒಂದೊಂದು ಪದ್ಯ ಮಾತ್ರ ದೊರೆಯುವುವು. ಒಟ್ಟು ಪದ್ಯ ಸಂಖ್ಯೆ ೨೩೪೩.
ಶಬ್ದಾಲಂಕಾರಗಳಲ್ಲಿ ಅನುಪ್ರಾಸವು ಮಾತ್ರ ಅಲ್ಲಲ್ಲಿ ತಕ್ಕಮಟ್ಟಿಗೆ ದೊರೆಯುವುದಲ್ಲದೆ ಯಮಕ ಮೊದಲಾದುವು ಕಡಿಮೆ. ಅರ್ಥಾಲಂಕಾರಗಳಲ್ಲಿ ಬಳಕೆ ಯಾಗಿರುವ ಉಪಮೆ, ಉತ್ಪ್ರೇಕ್ಷೆ , ರೂಪಕ, ಸ್ವಭಾವೋಕ್ತಿ, ಅರ್ಥಾ೦ತರನ್ಯಾಸ, ದೃಷ್ಟಾಂತ-ಇವುಗಳು ಹೆಚ್ಚಾಗಿವೆ; ಶೇಷ ಮೊದಲಾದ ಮಿಕ್ಕುವು ಕಡಿಮೆ. ರಸಗಳಲ್ಲಿ ಶಾಂತರಸವು ಪ್ರಧಾನವಾಗಿಯೂ ಉಳಿದುವು ಅಂಗವಾಗಿಯೂ ಇವೆ. ಅಷ್ಟಾದಶ ವರ್ಣನೆಗಳೆಲ್ಲವೂ ವ್ಯಕ್ತವಾಗಿವೆ. ಈ ಕಾವ್ಯವು ಕನ್ನಡದಲ್ಲಿ ಇದು ವರೆಗೆ ದೊರೆತಿರುವ ಅತ್ಯುತ್ತಮ ಕಾವ್ಯಗಳಲ್ಲೊಂದೆಂದು ನಿಸ್ಸಂಶಯವಾಗಿ ಹೇಳಬಹುದು.
ಕವಿ- ಈ ಗ್ರಂಥಕಾರನ ನಿಜವಾದ ಹೆಸರು ನಾಗಚಂದ್ರನೆಂದು ಗ್ರಂಥದ ಕೊನೆಯ ಎರಡು ಪದ್ಯಗಳಿಂದ ತಿಳಿಯಬರುವುದು. ಆದರೆ ಆತನು ಅಭಿನವ ಪಂಪನೆಂಬ ಹೆಸರಿನಿಂದಲೇ ಪ್ರಸಿದ್ದಿಗೆ ಬಂದಿರುವುದರಿಂದ, ಸಂಸ್ಕತ ಪುರಾತನ ಕವಿಗಳಲ್ಲಿ ಕಾಳಿದಾಸನು ಹೇಗೆ ಪ್ರಸಿದ್ದಿ ಪಡೆದಿರುವನೋ ಹಾಗೆಯೇ ಪುರಾತನ ಕನ್ನಡ ಕವಿಗಳಲ್ಲಿ ಆದಿಪಂಪನು ಪ್ರಸಿದ್ದಿ ಪಡೆದಿರಬೇಕು. * ಅಭಿನವಪಂಪನು ಈ ಗ್ರಂಥವಲ್ಲದೆ ಮಲ್ಲಿನಾಥಪುರಾಣವೆ೦ಬ ಕಾವ್ಯವನ್ನೂ ರಚಿಸಿರುವನು. 'ಜಿನಮುನಿ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೦
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
V1