ಅಮರಾವತಿಯ ಪಟ್ಟಣದೊಳಗೆ ದೇವೇಂದ್ರನಾಳುವ ನಂದನವನವಯ್ಯಾ. ಅತ್ತ ಸಾರಲೆ ಕಾಮಯ್ಯಾ ಮೋಹವೆ ನಿನಗೆ? ಲೋಕಾದಿಲೋಕವೆಲ್ಲವ ಮರುಳು ಮಾಡಿದೆ. ಕಾಮಾ ಗುಹೇಶ್ವರಲಿಂಗವನರಿಯೊ.