ಅಗ್ನಿ ಮುಟ್ಟಿದುದುವೊ ಆಕಾಶದಲದೆವೊ ಉದಕ ಮುಟ್ಟಿದುದುವೊ ನಿರಾಳದಲದೆವೊ ಬ್ರಹ್ಮರಂಧ್ರದಲದೆವೊ_ಭ್ರಮಿಸದೆ ನೋಡಾ ! ಆವಂಗೆಯೂ ಅಸದಳ ಆವಂಗೆಯೂ ಅರಿಯಬಾರದು! ಇದೇನು ಮಾಯೆ ಹೇಳಾ ಗುಹೇಶ್ವರಾ ?