ಅಯ್ಯ ಸಾತ್ವಿಕ ಶರಣರ ನುಡಿ ಹುಸಿಯೆ ? ಅದು ದಿಟ ಅದು ಆಟ. ಒಳಗೆಂಬುದೆ ದೇವಲೋಕ ಹೊರಗೆಂಬುದೆ ಮರ್ತ್ಯಲೋಕ. ಈ ಎರಡು ಲೋಕಕ್ಕೆ ಹೊರಗಾಗಿ ನಾವಿರಲು ಈ ಎರಡು ಲೋಕದೊಳಗೆಯೂ ತಾವೆ ಇರಲಿ ಗುಹೇಶ್ವರಾ.