ಮರನ ಹೂವ ಕೊಯಿದು ಮರಕ್ಕೇರಿಸಿ ನದಿಯುದಕವ ನದಿಗರ್ಪಿತವ ಮಾಡಿ ಕರುವನಗಲಿಸಿ ತಾಯ ಮರುಗಿಸಿ ಮೊಲೆವಾಲ ಕರೆದುಣಬೇಡವೋ ! ಕೂಡಲಸಂಗಮದೇವ ಮಾಡಿದ ಮಾಯೆ ಹಲಬರ ಬಾಯ ಟೊಣೆದೇ ಹೋಯಿತ್ತು.