ಮರನ ಹೂವ ಕೊಯಿದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಮರನ ಹೂವ ಕೊಯಿದು ಮರಕ್ಕೇರಿಸಿ
ನದಿಯುದಕವ ನದಿಗರ್ಪಿತವ ಮಾಡಿ
ಕರುವನಗಲಿಸಿ
ತಾಯ ಮರುಗಿಸಿ ಮೊಲೆವಾಲ ಕರೆದುಣಬೇಡವೋ ! ಕೂಡಲಸಂಗಮದೇವ ಮಾಡಿದ ಮಾಯೆ
ಹಲಬರ ಬಾಯ ಟೊಣೆದೇ ಹೋಯಿತ್ತು.