ನಿರ್ವಿಕಲ್ಪಿತವೆಂಬ ನಜದೊಳಗಯ್ಯಾ ನಿರಹಂಭಾವದಲ್ಲಿ ನಾನಿದ್ದೆನಯ್ಯಾ (ನೀ ನಿದ್ದೆಯಯ್ಯಾ ?) ನೋಡಿಹೆನೆಂದಡೆ ನೋಡಲಿಲ್ಲ ಕೇಳಿಹೆನೆಂದಡೆ ಕೇಳಲಿಲ್ಲ. ಘನನಿರಂಜನದ ಬೆಳಗಿಂಬಾದುದನೇನೆಂಬೆ ಗುಹೇಶ್ವರಾ ?