Library-logo-blue-outline.png
View-refresh.svg
Transclusion_Status_Detection_Tool

ನಿರ್ವಿಕಲ್ಪಿತವೆಂಬ ನಜದೊಳಗಯ್ಯಾ, ನಿರಹಂಭಾವದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ನಿರ್ವಿಕಲ್ಪಿತವೆಂಬ ನಜದೊಳಗಯ್ಯಾ
ನಿರಹಂಭಾವದಲ್ಲಿ ನಾನಿದ್ದೆನಯ್ಯಾ (ನೀ ನಿದ್ದೆಯಯ್ಯಾ ?) ನೋಡಿಹೆನೆಂದಡೆ ನೋಡಲಿಲ್ಲ
ಕೇಳಿಹೆನೆಂದಡೆ ಕೇಳಲಿಲ್ಲ. ಘನನಿರಂಜನದ ಬೆಳಗಿಂಬಾದುದನೇನೆಂಬೆ ಗುಹೇಶ್ವರಾ ?