ಹುಲ್ಲ ಕಿಚ್ಚುವ ಕಲ್ಲ ಬೀಜವ ನೀರ ನೆಳಲುವ ಗಾಳಿಯ ನಾರುವ ಅಗ್ನಿಯ ಹಗಿನುವ ಬಿಸಿಲಿನ ರುಚಿಯ ತನ್ನ ಬೆಳಗುವನಾರು ಬಲ್ಲರು ಗುಹೇಶ್ವರಾ ನಿಮ್ಮ ಶರಣರಲ್ಲದೆ ?