ಕಾಯಗೊಂಡ ಮಾನವರಂತೆ ಕೈಗೆ ಸಿಲುಕ. ಪ್ರಾಣವಿಡಿದ ಜೀವಿಗಳಂತೆ ಎಡೆಯಾಡದಿಪ್ಪ. ಕಾಂಬಡೆ ಕಂಗಳತೆಯಲ್ಲ ಕೇಳುವಡೆ ಕಿವಿಗಳತೆಯಲ್ಲ. ಗುಹೇಶ್ವರನ ನಿಲುವು ಬರಿಯ ಸ್ತೋತ್ರಕ್ಕೆ ನಿಲುಕದು. ಕಾಣಾ ಸಿದ್ಧರಾಮಯ್ಯಾ.