ಬಂದೂ ಬಾರದು ಹೊಂದಿಯೂ ಹೊಂದದು ನಿಂದೂ ನಿಲ್ಲದ ಪರಿಯ ನೋಡಾ ! ಬಿಂದು ನಾದವ ನುಂಗಿತ್ತು ಮತ್ತೊಂದಧಿಕವುಂಟೆ? ನವಖಂಡ ಪೃಥ್ವಿಯನೊಳಕೊಂಡ ಅಗಮ್ಯ ಸನ್ಮತ ಸುಖವಿರಲು ಗುಹೇಶ್ವರನ ಬೇರೆ ಅರಿಯ(ಅರಸ?)ಲುಂಟೆ?