ಬಲ್ಲೆನು ಒಲ್ಲೆ ಮರ್ತ್ಯದ ಹಂಗ ಹಿಂದಣ ಮರವೆಯಿಂದ ಬಂದು ನೊಂದೆ ಸಾಕು. ಇನ್ನು ಅರಿದೆ ತ್ರಿವಿಧಪಾಶವ ಹರಿದೆ. ಗುಹೇಶ್ವರಾ ಇನ್ನು ಮರ್ತ್ಯದ ಸುಖವ ಮನದಲ್ಲಿ ನೆನೆದೆನಾದಡೆ ನಿಮ್ಮಾಣೆ ನಿಮ್ಮ ರಾಣಿವಾಸದಾಣೆಯಯ್ಯಾ.