ಕಂಗಳಾಲಿಯ ಕರಿಯ ನಾಳದಲ್ಲಿ ಈರೇಳು ಭುವನಂಗಳಡಗಿದವು! ನಾಟಕ ನಾಟಕವ ರಚಿಸುತ್ತ ಆಡಿಸುವ ಸೂತ್ರದ ಪರಿ ಗುಹೇಶ್ವರಲಿಂಗ ನಿರಾಳಚೈತನ್ಯ.