ವಿಷಯಕ್ಕೆ ಹೋಗು

ಸುಳಿದು ಸುತ್ತುವ ವಾಯುವಿಕಾರದ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸುಳಿದು ಸುತ್ತುವ ವಾಯುವಿಕಾರದ ಸಂಸಾರದ ಸುಳುಹು
ಕಾಯವಿಕಾರದ ಕತ್ತಲೆ
ಮನೋವಿಕಾರದ ಮಾಯೆ
ಕಾಮವಿಕಾರದ ಕಾಳರಕ್ಕಸಿ
ಇಂದ್ರಿಯವಿಕಾರವೆಂಬ ಹುಚ್ಚು ಶುನಿಗಳು
ಭಾವವಿಕಾರವೆಂಬ ಭ್ರಮೆ_ ಮೊದಲಾದ ಷಡ್ವಿಕಾರಂಗಳಿಗಾಸ್ಪದವಾದ ವಾಯುವಿಕಾರದ ವ್ಯವಹರಣೆಯುಳ್ಳನ್ನಕ್ಕ
ಅರಿಯೆನರಿಯೆ ನೆರೆ ಶಿವಪದವ. ಗುಹೇಶ್ವರಲಿಂಗದ ನಿಜವನರಿದ ಬಳಿಕ
ಅರಿಯೆನರಿಯೆ ಲೋಕದ ಬಳಕೆಯ.