ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ → ವಾದ್ರೂಷಣ, ದೆ, ಬಹುಶಃ ಇವತ್ತೇ ಬಂದಾನು' ಎಂದು ಹೇಳಿದರು. ಇಷ್ಟು ಆಗ ಆಗುವ ಸ್ವರಲ್ಲಿ ಶಿವಾಜಿ ಮಹಾರಾಜರು ದಿವಾಕರಭಟ್ಟನೊಂದಿಗೆ ಬಂದು ತಲ್ಪಿದರು, ಅವರ ಹಿಂದಿಂದೆ ಚಿಟ್ಟಸ, ಮುಜುಮದಾರ ಮುಂತಾದ ಜನರು ಬಂದರು, ಶಿವಾಜಿ ಮ ಹಾರಾಜರಿಗೆ ಸಮರ್ಥರ ದರ್ಶನವಾದ ತರುವಾಯ ಮಹಾರಾಜರು ಸಮರ್ಥರ ಪಾ ದಗಳಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿ ಅನುಗ್ರಹ ಪ್ರಸಾದವನ್ನು ಕೊಡ ಬೇಕೆಂದು ಪ್ರಾರ್ಥನೆಯನ್ನು ಮಾಡಿದರು. ಆಗ ಸಮರ್ಥರು ಒಡಂಬಡಲಾಗಿ ಮ ಹಾರಾಜರು ಸ್ನಾನ ಮಾಡಿ ಸಮರ್ಥರ ಪೂಜೆಯನ್ನು ಮಾಡಿದರು, ಪೂಜಾ ಸಮ ಯಕ್ಕೆ ಮಹಾರಾಜರು ದ್ರವ್ಯ ವಸ್ಯ ಭೂಷಣಗಳನ್ನು ಅರ್ಪಿಸಿದರು. ಮೊಹರು, ಫುಘಳಿ ರುಪಾಯಿ ಮುಂತಾದವುಗಳನ್ನು ಸರಿಬೆರಿಕ ಮಾಡಿ ಸಮರ್ಥರ ಪಾದುಕಗಳ ಮಲೆ ಅಭಿಷೇಕ ಮಾಡಿದರು. ಅದರೂಳಗ ಕೆಲವನ್ನು ಸಮರ್ಥರು ದನ ಆಗಿಯುವ ಹುಡುಗರಿಗೆ ಹಂಚಿ ಕಲವನ್ನು ನಾಲ್ಕೂ ದಿಕ್ಕಿಗೆ ಸರಿ ಮಾಡಿದರು, ಪೂಜಾ ಧಿಯು ಮುಗಿದ ತರುವಾಯ ಸಮರ್ಥರು ಮಹಾರಾಜರಿಗೆ ಅನುಗ್ರಹ ಮಂತ್ರವನು ಉಪದೇಶಿಸಿದರು, ಅದರಿಂದ ಮಹಾರಾಜರು ಬ್ರಹ್ಮಾನಂದವನ್ನು ಹೊಂದಿ, ತಾವು ಇನ್ನು ರಾಜ್ಯಕ್ಕೆ ಮರಳಿ ಹೋಗುವದಿಲ್ಲೆ೦ತಲೂ ಚರಣ ಸನ್ನಿಧಿಯಲ್ಲಿಯೇ ಯಾ ವಾಗಳು ಇದ್ದು ಸೇವೆಯನ್ನು ಮಾಡಲಿಕ್ಕೆ ತಮಗೆ ಅಪ್ಪಣಣಿಯು ದೊರೆಯಬೇ ಕೆಂತಲೂ ಪ್ರಾರ್ಥಿಸಿದರು, ಅದನ್ನು ಕೇಳಿ ಸಮರ್ಥರು ಮುಗಳ್ಳ ಗೆಯಿಂದ ನಕ್ಕು * ಅರಸರಿಗೆ ಕಾತ್ರ ಧರ್ಮವೇ ಉಚಿತವಾಗಿರುತ್ತದೆ, ಅರಸರು ತಮ್ಮ ರಾಜಧಾನಿ ಇಲ್ಲಿಯಲ್ಲಿದ್ದು ದೇವ ಬ್ರಾಹ್ಮಣರ ಸೇವೆಯನ್ನು ಮಾಡಬೇಕು, ಅಂದರೆ ಅದರಿಂದ ಲೇ ಅವರಿಗೆ ಮೋಕ್ಷ ಏಪ್ತಿಯಾಗುತ್ತದೆ” ಎಂಬದಾಗಿ ಸವಿಸ್ತಾರವಾಗಿ ರಾಜಧ ರ್ಮವನ್ನೂ ಕಾತ್ರ ಧರ್ಮವನ್ನೂ ಉಪದೇಶಿಸಿದರು, ಅಲ್ಲಿ ಮಹಾರಾಜರು ಮೂ ರು ರಾತ್ರಿಗಳನ್ನು ಕಳೆದು ಸಮರ್ಥರ ಅಪ್ಪಣಿಯನ್ನು ಹೊಂದಿ ಪ್ರತಾಪಗಡಕ್ಕೆ ಮರಳಿ ಬಂದು ತಮ್ಮ ತಾಯಿಯಾದ ಜಿಜಾಬಾಯಿಯ ಮುಂದೆ ಈ ನಡೆದ ವೈ ಶಾಂತವನ್ನು ಹೇಳಿ ತಮಗೆ ಸಮರ್ಧರು ಕೊಟ್ಟ ತೀರ್ಥ ಪ್ರಸಾದವನ್ನು ಅವಳೆ ಮುಂದೆ ಇಟ್ಟರು. ಅವಳು ತನ್ನ ಮುಂದೆ ಮಹಾರಾಜರು ತಂದಿಟ್ಟ ಮಣ್ಣು, ಲದ್ದಿ, ಮತ್ತು ಹರಳುಗಳನ್ನು ನೋಡಿ ಇವುಗಳ ಅರ್ಥವೇನೆಂದು ಕೇಳಿದಳು, ಅದ ಜೈ ಮಹಾರಾಜರು ಈ ಮಣ್ಣು ಅಂದರೆ ಭೂಮಿ ಎಂತಲೂ ಲದ್ದಿ ಯೆಂದರೆ ಐಶ್ವರ್ಯ ಬಂತಲೂ ಹರಳು ಅಂದರೆ ಕೋಟೆಎಂತಲೂ ಅರ್ಥವಾಗುತ್ತದೆ. ಆದ್ದರಿಂದ ನನಗೆ ಇನ್ನು ಭೂಮಿಯೆಲ್ಲ ಹಸ್ತಗತವಾಗುವದು; ನನಗೆ ದೊ ಈ ಐಶ್ವರ್ಯವು ಪ್ರಾಪ್ತವಾಗುವದು; ಮತ್ತು ಅನೇಕ ಕೋಟೆಗಳು ನನಗೆ ದೊರಕುವವ" ಎಂದು ಹೇಳಿದರು, ಇದನ್ನು ಕೇಳಿ ಜಿಜಾಬಾಯಿಯು ಬಹಳ ಆನಂದ ಪಟ್ಟಳು, ಶ್ರೀಶಿವಾಜಿ ಮಹಾರಾಜರು ಶ್ರೀರಾಮದಾಸ ಸ್ವಾಮಿಗಳ ಕಡೆಯಿಂದ ಉಪದೇಶ ತೆಗೆದುಕೊಂಡಾಗ್ಗೆ ೨೫ ವರ್ಷ ಪ್ರಾಯದವರಿದ್ದರು.