ಆಚಾರವೆ ಲಿಂಗ ಆ ಆಚಾದರಿವೆ ಜಂಗಮ ಅಂಗವೆ ಲಿಂಗ ಚೈತನ್ಯವೆ ಜಂಗಮ ಆ ಜಂಗಮದ ಸೇವೆಯೆ ಲಿಂಗ ಕೈಕೊಂಬುದೆ ಜಂಗಮ. ನಮ್ಮ ಗುಹೇಶ್ವರನ ಶರಣರು ಮಚ್ಚುವಂತೆ ಮಡಿವಾಳನ ಕಾಯಕದಂತೆ ನಿರೂಪಿಸಿದ ಚನ್ನಬಸವಣ್ಣನ ಕರುಣದಲ್ಲಿ ಬದುಕಾ ಚಂದಯ್ಯಾ.