ಉಚ್ಛಿಷ್ಟಕಾಯ ಚಾಂಡಾಲದೊಳಗೆ ಜನಿಸಿದ ಹದಿನಾಲ್ಕು ಭುವನದೊಳಗೆಲ್ಲಾ `ನಾವು ಬಲ್ಲೆವು ನಾವು ಹಿರಿಯರು ನಾವು ಘನಮಹಿಮರು' ಎಂಬರೆಲ್ಲಾ ಮತ್ತೆ ಸಾವರೆ ಇದೇನೊ ಇದೆಂತೊ ? ಗುಹೇಶ್ವರನೊಬ್ಬ ತಪ್ಪಿಸಿ ಮಿಕ್ಕಾದವರೆಲ್ಲ ಪ್ರಳಯಕ್ಕೆ ಒಳಗು !