ಬೋನದೊಳಗೊಂದು ಆನೆ ಇದ್ದಿತ್ತು. ಬೋನ ಬೆಂದಿತ್ತು ಆನೆ ಬದುಕಿತ್ತು_ಇದೇನು ಸೋಜಿಗವಯ್ಯಾ ? ದೇವ ಸತ್ತ ದೇವಿ ಕೆಟ್ಟಳು ! ಆನು ಬದುಕಿದೆನು ಗುಹೇಶ್ವರಾ.