ಆಕಾಶವ ಕಪ್ಪೆ ನುಂಗಿದಡೆ ಆಗಳೆ ಹತ್ತಿತ್ತು ರಾಹು! ನೋಡಿರೆ; ಅಪೂರ್ವ ಅತಿಶಯವ! ಅಂಧಕ ಹಾವ ಹಿಡಿದ._ ಇದು ಕಾರಣ; ಲೋಕಕ್ಕೆ ಅರುಹದೆ ನಾನು ಅರಿದೆನು ಗುಹೇಶ್ವರಾ.