ಗಂಗಾದೇವಿಯ ಹುಳಿಯ ಕಾಸಿ ಗೌರಿದೇವಿಯ ಕೂಳನಟ್ಟು ಭಕ್ತನ ಬಾಡನಟ್ಟು ದೇವನ ಸಾಸವೆಗಲಸಿ ಬ್ರಹ್ಮನಡ್ಡಣಿಗೆ ವಿಷ್ಣು ಪರಿಯಾಣ ರುದ್ರನೋಗರ ಈಶ್ವರ ಮೇಲೋಗರ ಸದಾಶಿವ ತುಪ್ಪ; ಉಣಲಿಕ್ಕಿ ಕೈಕಾಲು ಮುರಿಯಿತ್ತು ಗುಹೇಶ್ವರಾ.