ಹುಟ್ಟಿ ಕೆಟ್ಟಿತ್ತು ಭಾಗ ಹುಟ್ಟದೆ ಕೆಟ್ಟಿತ್ತು ಭಾಗ ಮುಟ್ಟಿ ಕೆಟ್ಟಿತ್ತು ಭಾಗ ಮುಟ್ಟದೆ ಕೆಟ್ಟಿತ್ತು ಭಾಗ. ಇದೇನೊ ? ಇದೆಂತೊ? ಅರಿಯಲೆ ಬಾರದು. ಇದೇನೊ ಇದೆಂತೊ ಎಂಬ ಎರಡು ಮಾತಿನ ನಡುವೆ ಉರಿ ಹತ್ತಿತ್ತು ಮೂರು ಲೋಕವ ಗುಹೇಶ್ವರಾ.