Pages(key to [[Help:Page Status{{!}}Page Status]])
ನೆಲದತ್ತ ಮುಂದಣ ಬಾಗಿಲು ಮೂರು ಮೊನೆಯ ಕಂಭದ ಶೂಲದಲ್ಲಿ ಒಂದು ದೇಗುಲ ! ಅಲ್ಲಿ ಒಳಗಣ ಹೂವಿನ ಕಲ್ಲಿನಲ್ಲಿ ಸಿಲುಕಿ (ನೆಲಸಿ?) ನಾದ ಮೂರುತಿ ಲಿಂಗವಿಪ್ಪುದು. ಒಂದು ಮಾತನಾಡಿದಡೆ ನುಡಿವುದು. ಗುಹೇಶ್ವರ ಮೆಚ್ಚಲು ಬಹುಮಾತಿನ ಮಾಲೆಯ ಅನುಭಾವಕ್ಕೆ ನಾಚುವನು ಕಾಣಾ ಸಂಗನಬಸವಣ್ಣಾ.