ವಿಷಯಕ್ಕೆ ಹೋಗು

ಭೂವಳಯ ಮಧ್ಯದ ಎಂಟೆಸಳ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಭೂವಳಯ ಮಧ್ಯದ ಎಂಟೆಸಳ ಪದ್ಮದ ಮೇಲೆ ಸುಳಿವನ ಎಚ್ಚರಲೀಯ
ಕಂಟಕ ವಿರಹಿತನು
ನಂಟರಿಗೆ ವಿರೋಧಿಸಿ
ಇಳೆಯ ಗುಣ ರಹಿತನು
ಗಗನಕಮಲಕುಸುಮ ಪರಿಣಾಮದೊಳಗೆ ಪರಿಣಾಮಿ ನೋಡಾ ! ತಾನೆಂಬುದ ಹುಸಿ ಮಾಡಿ
ಲಿಂಗಜಂಗಮ ದಿಟವೆಂದು ಸಕಲ ಸುಖಭೋಗಂಗಳನರ್ಪಿಸಿದ. ಗುಹೇಶ್ವರಾ [ಅದು]
ನಿಮ್ಮ ಶರಣ ಬಸವಣ್ಣಂಗಲ್ಲದೆ ಇನ್ನಾರಿಗೂ ಅಳವಡದು.