ಭೂವಳಯ ಮಧ್ಯದ ಎಂಟೆಸಳ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಭೂವಳಯ ಮಧ್ಯದ ಎಂಟೆಸಳ ಪದ್ಮದ ಮೇಲೆ ಸುಳಿವನ ಎಚ್ಚರಲೀಯ
ಕಂಟಕ ವಿರಹಿತನು
ನಂಟರಿಗೆ ವಿರೋಧಿಸಿ
ಇಳೆಯ ಗುಣ ರಹಿತನು
ಗಗನಕಮಲಕುಸುಮ ಪರಿಣಾಮದೊಳಗೆ ಪರಿಣಾಮಿ ನೋಡಾ ! ತಾನೆಂಬುದ ಹುಸಿ ಮಾಡಿ
ಲಿಂಗಜಂಗಮ ದಿಟವೆಂದು ಸಕಲ ಸುಖಭೋಗಂಗಳನರ್ಪಿಸಿದ. ಗುಹೇಶ್ವರಾ [ಅದು]
ನಿಮ್ಮ ಶರಣ ಬಸವಣ್ಣಂಗಲ್ಲದೆ ಇನ್ನಾರಿಗೂ ಅಳವಡದು.