Pages(key to [[Help:Page Status{{!}}Page Status]])
ಕೆಳಗೇಳು ಭುವನಂಗಳಿಲ್ಲದಂದು ಮೇಲೇಳು ಭುವನಂಗಳಿಲ್ಲದಂದು _ ಅಂದು ಆದ ಗುರು ಅಂದು ಆದ ಲಿಂಗ ಅಂದು ಆದ ಜಂಗಮ ಅಂದು ಆದ ಪ್ರಸಾದ ಅಂದು ಆದ ಪಾದೋದಕ. ಇಂದಿನದಾವುದೂ ಹೊಸತಿಲ್ಲಯ್ಯಾ. ಶಶಿಧರಂಗೆ ವೃಷಭನಾಗಿದ್ದಂದು ಗುಹೇಶ್ವರನ ಶರಣ ಸಂಗನಬಸವಣ್ಣನಂದೆ ಸಾಹಿತ್ಯನು.