ಕಾಲಿಲ್ಲದ ನಡೆ ಒಡಲಿಲ್ಲದ ರೂಪು ಕಂಗಳಿಲ್ಲದ ನೋಟ ಮನವಿಲ್ಲದ ಬೇಟ; ಭಾವವಿಲ್ಲದ ತೃಪ್ತಿ ಜೀವವಿಲ್ಲದ ಶರಣನ ಸುಳುಹ ಕಂಡು ಬೆರಗಾದೆನಯ್ಯಾ ಅಖಂಡೇಶ್ವರಾ.