ಪುಟ:ಕರ್ನಾಟಕ ಗತವೈಭವ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨ನೆಯ ಪ್ರಕರಣ - ವೈಭವ-ವರ್ಣನೆ

೮೭


೧೨ನೆಯ ಪ್ರಕರಣ


ವೈಭವ ವರ್ಣನೆ

ಹಿಂ

ದಿನ ಪ್ರಕರಣದಲ್ಲಿ ಹಿಂದಿನ ಕೆಲವು ಪ್ರಕರಣಗಳಲ್ಲಿ ಕರ್ನಾಟಕದ ಇತಿಹಾಸದೊಳಗಿನ ಮಹತ್ವದ ಸಂಗತಿಗಳನ್ನು ಸಂಕ್ಷೇಪವಾಗಿ ಹೇಳಿರುವೆವಷ್ಟೆ. ಇನ್ನು ಈ ಪ್ರಕರಣದಲ್ಲಿ ನಾವು ನಮ್ಮ ಕರ್ನಾಟಕ ದೇಶವನ್ನೂ ರಾಜಧಾನಿಗಳನ್ನೂ ವರ್ಣಿಸುವೆವು. ನಾವು ನಮ್ಮ ಸ್ವಕಪೋಲ ಕಲ್ಪಿತವಾದ ವರ್ಣನೆಗಳನ್ನು ಇಲ್ಲಿ ಕೊಡುವುದಿಲ್ಲ. ನಮ್ಮ ಕರ್ನಾಟಕದ ರಾಜರನ್ನೂ, ಪಟ್ಟಣಗಳನ್ನೂ ಕುರಿತು ಪರದೇಶೀಯ ಪ್ರವಾಸಿಕರೂ ಪ್ರಾಚೀನಕಾಲದ ಕವಿಗಳೂ ಮಾಡಿದ ವರ್ಣನೆಗಳನ್ನು ಮಾತ್ರವೇ ಇಲ್ಲಿ ಕೊಡುವೆವು.

ರ್ನಾಟಕದಲ್ಲಿ ಎಲ್ಲಕ್ಕೂ ಹಳೆಯ ಅರಸು ಮನೆತನವು ಕದಂಬರದು. ಇವರ ರಾಜಧಾನಿಯು ಬನವಾಸಿ. ಕದಂಬರಾಳಿದ ದೇಶವನ್ನು ಬನವಾಸಿ ದೇಶ ವೆಂದೂ ಕರೆಯುತ್ತಿದ್ದರು. ಈ ಬನವಾಸಿ ದೇಶವನ್ನು ಕನ್ನಡ ಭಾಷೆಯ ಪ್ರಖ್ಯಾತ ಕವಿಯಾದ ಆದಿಪಂಪನು ತನ್ನ ಭಾರತದಲ್ಲಿ ಈ ಬಗೆಯಾಗಿ ವರ್ಣಿಸಿರುವನು.

ತೆಂಕಣ ಗಾಳಿ ಸೋಂಕಿದೊಡಮೊಳ್ಳುತಿಗೆಯೊಡಮಿಪನಾಳ ಗೇ |
 ಯಂ ಕಿವಿವೊಕ್ಕಡಂ ಬಿರಿದ ಮಲ್ಲಿಗೆಗಂದೊಡಮಾದ ಕೆಂದಂ ||
ಪಂ ಕೆಳೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ |
 ರಂಕುಸವಿಟೊಡಂ ನೆನೆವುದೆನ್ನ ಮನಂ ಬನವಾಸಿದೇಶಮಂ ||

'ದಕ್ಷಿಣದ ಮಲಯಮಾರುತವು ನನ್ನ ಮೈಗೆ ಸುಳಿದರೂ, ಉತ್ತಮವಾದ ಸ್ತೋತ್ರಮಿಶ್ರಿತವಾದ ಸುಭಾಷಿತಗಳನ್ನು ಶ್ರವಣಮಾಡಿದರೂ, ಇಂಪಾದ ಗಾಯನವು ಕಿವಿಗೆ ಬಿದ್ದರೂ, ಅದೇ ಈಗ ಅರಳಿದ ಮಲ್ಲಿಗೆಯ ಮೊಗ್ಗೆಗಳನ್ನು ಕಂಡರೂ ಕಾಂತಾಸಮಾಗಮದ ಸಂತೋಷವುಂಟಾದರೂ, ವಸಂತೋತ್ಸವವನ್ನು ಅನುಭವಿಸಿದರೂ (ಮುಖ್ಯವಾಗಿ, ಎಂಥ ಸುಖಗಳನ್ನು ಅನುಭವಿಸುತ್ತಿದ್ದಾಗ್ಯೂ), ಯಾರು ಎಷ್ಟೇ ಪ್ರತಿಬಂಧಮಾಡಿದರೂ, ನನ್ನ ಮನಸ್ಸು ಆ ಬನವಾಸಿದೇಶವನ್ನು ಸ್ಮರಿಸದೆ ನಿಲ್ಲದು.
ಬಾದಾಮಿಯ ಚಾಲುಕ್ಯವಂಶದ ಪ್ರಖ್ಯಾತ ರಾಜನಾದ ೨ನೆಯ ಪುಲಿಕೇಶಿಯ ಆಳಿಕೆಯಲ್ಲಿ ಹುಎನ್ ತ್ಸಾಂಗ ಎಂಬೊಬ್ಬ ಚೀನ ಪ್ರವಾಸಿಯು, ೬೨೯ರಿಂದ