ಕಾಯವೇ ಕೈಲಾಸವಾಗಿ ಮನವೇ ಮಹಾಲಿಂಗವಾಗಿ ಭಾವವೇ ಅವಿರಳಪುಷ್ಪದ ಪೂಜೆಯಾಗಿ ಅಖಂಡ ಪರಿಪೂರ್ಣಜ್ಞಾನದ ಬೆಳಗಿನೊಳಗೆ ಸುಳಿವ ಮಹಾಶರಣರ ತೋರಿಸಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ.