ಏತ ತಲೆವಾಗಿದಡೇನು ಗುರುಭಕ್ತನಾಗಬಲ್ಲುದೆ ಇಕ್ಕುಳ ಕೈಮುಗಿದಡೇನು ಭೃತ್ಯಾಚಾರಿಯಾಗಬಲ್ಲುದೆ ಗಿಳಿಯೋದಿದಡೇನು ಲಿಂಗವೇದಿಯಾಗಬಲ್ಲುದೆ ಕೂಡಲಸಂಗನ ಶರಣರು ಬಂದ ಬರವ ನಿಂದ ನಿಲವ ಅನಂಗಸಂಗಿಗಳೆತ್ತಬಲ್ಲರು!