ಅಂಬರದೊಳಗಣ ಅಮೃತದ ಕೊಣನುಕ್ಕಿ ಕುಂಭಿನಿಯ ಮೇಲೆ ಸೂಸಲು ಅಲ್ಲಿದ್ದ ಸಕಲ ಜನವೆಲ್ಲ ಅಮೃತವ ಕಂಡು ದಣಿಯಲುಂಡು ಅನಿತ್ಯದ ಭೋಗವ ಮರೆದು ಮರ್ತ್ಯದ ಹಂಗು ಹರಿದು ನಿತ್ಯಮುಕ್ತರಾಗಿರ್ದರಯ್ಯಾ ಅಖಂಡೇಶ್ವರಾ.